|
|
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ & ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಚಾಲಕ, ಚಾಲಕ-ವ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿ 2011 (ಸುದ್ದಿ ಹಕ್ಕಿ http://kannada.newsbird.in ನಲ್ಲಿ ಪ್ರಕಟಿಸಿದ ಲೇಖನ) NWKRTC ಸಂಸ್ಥೆಯಲ್ಲಿ ಖಾಲಿ 10 ಇರುವ ೧೦ಚಾಲಕ (ಹಿಂಬಾಕಿ) ಹಾಗು 1339 ಚಾಲಕ-ವ-ನಿರ್ವಾಹಕ(ದರ್ಜೆ - 3) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭಾರ್ತಿ ಮಾಡಲು ಅರ್ಹ ಆಸಕ್ತ ಅಭ್ಯರ್ಥಿಗಳಿಂದ ವಿದ್ಯುನ್ಮಾನ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ವಾಯುವ್ಯ ಕರ್ನಾಟಕದ ಹುಬ್ಬಳ್ಳಿ, ಬೆಳಗಾಂ, ಶಿರಸಿ, ಹಾವೇರಿ, ಚಿಕ್ಕೋಡಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ಯಾವುದೇ ಘಟಕಗಳಿಗೆ ಅವಶ್ಯಕತೆಗೆ ಅನುಗುಣವಾಗಿ ನಿಯೋಜಿಸಬಹುದು.
ಪ್ರಮುಖ ದಿನಾಂಕಗಳು :
- ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭ ದಿನಾಂಕ : 05-08-2011
- ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 29-08-2011 ರಂದು ಮಧ್ಯಾಹ್ನ 1:00 ಗಂಟೆಯವರೆಗೆ
ಖಾಲಿ ಇರುವ ಹುದ್ದೆಗಳ ಸಂಖ್ಯೆ :
- ಚಾಲಕ (ಹಿಂಬಾಕಿ) : 10
- ಚಾಲಕ-ವ-ನಿರ್ವಾಹಕ : 1339
ಅರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು
- ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಣಿಕೆ ವಾಹನ ( ) ಚಾಲನಾ ಪರವಾನಗಿ ಹೊಂದಿ ಕನಿಷ್ಠ ೨ ವರ್ಷಗಳಾಗಿರಬೇಕು ಹಾಗು ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಗಿ ಮತ್ತು ಕರ್ನಾಟಕ ಬಾಡ್ಜ್ ಹೊಂದಿರಬೇಕು.
- ನಿರ್ವಾಹಕರ ಪರವಾನಗಿ ಮತ್ತು ಕರ್ನಾಟಕ ಬಾಡ್ಜ್ ಹೊಂದಿರಬೇಕು.
ವಯೋಮಿತಿ : ಕನಿಷ್ಠ 24 ವರ್ಷ ತುಂಬಿರಬೇಕು ಮತ್ತು ಗರಿಷ್ಠ 35 ವರ್ಷದೊಳಗಿರಬೇಕು (ಪ.ಜಾ./ಪ.ಪಂ./ಪ್ರ-೧ ಅಭ್ಯರ್ಥಿಗಳಿಗೆ 40 ವರ್ಷ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 38 ವರ್ಷದೊಳಗಿರಬೇಕು)
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಅಂತರ್ಜಾಲ ಪುಟಗಳಿಗೆ ಭೇಟಿ ಕೊಡಿ :
0 ಕಾಮೆಂಟ್(ಗಳು): on "ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕ, ಚಾಲಕ-ವ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿ 2011 ವಿದ್ಯುನ್ಮಾನ ಅರ್ಜಿ"
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯ / ಪ್ರಶ್ನೆ / ಸಲಹೆಗಳನ್ನು ಇಲ್ಲಿ ಟೈಪ್ ಮಾಡಿ. ಕನ್ನಡದಲ್ಲಿ ಟೈಪಿಸಲು ಗೂಗಲ್ ಭಾಷಾಂತರ ಸೇವೆಯನ್ನು ಬಳಸಿ